ಬೈಲಕೆರೆ ಶಿವನಂಜಪ್ಪ ಲಿಂಗದೇವರು ಒಬ್ಬ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ನಿರ್ದೇಶಕರು. ಅವರು ಹಲವಾರು ಧಾರಾವಾಹಿ, ಸಿನೆಮಾ ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು ನಾನು ಅವನಲ್ಲ...ಅವಳು, ಮೌನಿ, ಮತ್ತು ಕಾಡ ಬೆಳದಿಂಗಳು ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ೧೯೬೭ರಲ್ಲಿ ಜನಿಸಿದ ಲಿಂಗದೇವರು ಈ ಕ್ಷೇತ್ರಕ್ಕೆ ಬಂದಾಗಿನಿಂದ ನಟ, ನಿರ್ದೇಶಕ, ನಿರ್ಮಾಪಕರಾಗಿ ೧೯೯೦ನೇ ಇಸವಿಯಿಂದ ಸಾವಿರಕ್ಕೂ ಹೆಚ್ಚಿನ ಎಪಿಸೋಡುಗಳನ್ನು ತಯಾರಿಸಿದ್ದಾರೆ. == ಟೆಲಿ ಸೀರಿಯಲ್‍ಗಳು == ಶಿಕಾರಿ - ಯಶವಂತ ಚಿತ್ತಾಲ ಬಂಡಾಯ - ವ್ಯಾಸರಾಯ ಬಲ್ಲಾಳ ಜೀವನಚಕ್ರ - ಸಿ.ಎನ್.ಮುಕ್ತಾ == ಮೆಗಾಧಾರಾವಾಹಿ == ಕಲ್ಯಾಣಿ == ಸಿನೆಮಾಗಳು == ಮೌನಿ (ಯು.ಆರ್.ಅನಂತಮೂರ್ತಿಯವರ ಕತೆಯಾಧಾರಿತ) ಕಾಡ ಬೆಳದಿಂಗಳು ನಾನು ಅವನಲ್ಲ... ಅವಳು == ಜವಾಬ್ದಾರಿಗಳು == ಜ್ಯೂರಿ ಸದಸ್ಯ, ೨೦೧೦-೧೧ ಸಬ್ಸಿಡಿ ಸಿನೆಮಾ ಆಯ್ಕೆ ಸಮಿತಿ ಅಧ್ಯಕ್ಷ, ೨೦೧೧ ಜ್ಯೂರಿ ಸದಸ್ಯ, ೨೦೧೩ == ಪ್ರಶಸ್ತಿಗಳು == ನಾನು ಅವನಲ್ಲ...ಅವಳು ಚಿತ್ರಕ್ಕಾಗಿ ೨೦೧೬ ರಲ್ಲಿ ಎರಡನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ. == ಉಲ್ಲೇಖಗಳು ==